ಶಿಕ್ಷಣವೆಂದರೆ ಕೇವಲ ಅಂಕಗಳೇ ಮಾನದಂಡವಲ್ಲ. ಅಂಕಗಳ ಜೊತೆಯಲ್ಲಿ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಸಂಸ್ಕಾರವಂತರಾಗುವುದು. ಪಿಯು ಶಿಕ್ಷಣ ವೃತ್ತಿಪರ ಕೋರ್ಸಗಳು ಆಕಾಂಕ್ಷಿಗಳ ಮಟ್ಟಿಗೆ ಬಹಳ ಮಹತ್ವದ ಘಟ್ಟ. ಅದನ್ನು ಭಾವನಾತ್ಮಕವಾಗಿ ಬಿಂಬಿಸಿ, ಪೋಷಕರನ್ನು ನಂಬಿಸಿ ಕೋಚಿಂಗ್ ಹಾಗೂ ತರಬೇತಿ ಹೆಸರಲ್ಲಿ ಮೋಸಮಾಡುವ ವ್ಯವಸ್ಥೆಗಳೇ ಹೆಚ್ಚು. ಇಂತಹ ಸಂದಿಗ್ದ ಸಂದರ್ಭಗಳಲ್ಲಿ ಎಸ್. ಆರ್. ಎಸ್. ಪಿಯು ಕಾಲೇಜು ಆಕಾಂಕ್ಷಿಗಳ ಬೇಡಿಕೆಯನ್ನು ಅರಿತು ತುಂಬುವ ಸಮಯೋಚಿತ ಆಪ್ತ ಸಮಾಲೋಚನೆಯೊಂದಿಗೆ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಮನ ಮುಟ್ಟುವ ರೀತಿ ಪಾಠ ಮಾಡಿ, ನಂತರ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳನ್ನು ಆತ್ಮವಿಶ್ವಾಸಕ್ಕೆ ತೆಗೆದುಕೊಂಡು ಸಾಂಪ್ರದಾಯಕ ಹಾಗೂ ಆಧುನಿಕ ತಾಂತ್ರಿಕ ಮಾದರಿಗಳನ್ನು ಮೇಳೈಸಿಕೊಂಡು ಪಿ ಯು ತರಬೇತಿನ್ನು ಅರ್ಥಪೂರ್ಣವಾಗಿಸುವ ಅಪರೂಪದ ಪಿಯು ಕಾಲೇಜು.
ಚಿತ್ರದುರ್ಗದ ಎಸ್.ಆರ್.ಎಸ್ ಪಿಯು ಕಾಲೇಜು ಇಂದಿನ ಸ್ಟರ್ಧಾತ್ಮಕ ಜಗತ್ತಿಗೆ ಪೂರಕವಾಗಿ ಪಿಯುಸಿ, ಸಿಇಟಿ, ಜೆಇಇ, ನೀಟ್,ಬಿಎಸ್ಸಿ ಎಜಿ, ಹಾರ್ಟಿಕಲ್ಚರ್ ಪ್ರಾಕ್ಟಿಕಲ್ ಟ್ರೈನಿಂಗ್, ಐಸಿಎಆರ್, ಸಿಎ-ಸಿಎಸ್, ಸಿಎಮ್ಎಸ್ & ಕ್ಲಾಟ್ ಪರೀಕ್ಷೆಗಳಿಗೆ ಉತ್ತಮ ತರಬೇತಿನ್ನು ನೀಡಿ ರಾಜ್ಯಮಟ್ಟದಲ್ಲಿ ರ್ಯಾಂಕ್ ವಿಜೇತರನ್ನು ಸೃಷ್ಟಿಸುವಲ್ಲಿ ಚಿತ್ರದುರ್ಗದ ಎಸ್.ಆರ್. ಎಸ್ ಸಂಸ್ಥೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಬೇರೆ ಬೇರೆ ಜಿಲ್ಲೆಗಳಿಗೆ ಉತ್ತಮ ಶಿಕ್ಷಣಕ್ಕಾಗಿ ಹೋಗುತ್ತಿದ್ದ ಪ್ರತಿಭಾವಂತ ಮಕ್ಕಳಿಗೆ ಚಿತ್ರದುರ್ಗದಂತಹ ಬಯಲುಸೀಮೆಯಲ್ಲಿ ಒಂದು ಉತ್ತಮ ಸಂಸ್ಥೆಯನ್ನು ಕಟ್ಟಬೇಕೆಂಬುದು ಛೇರ್ಮನ್ ಶ್ರೀ ಬಿ ಎ ಲಿಂಗಾರೆಡ್ಡಿಯವರ ಮಹದಾಸೆಯಾಗಿತ್ತು. ಅವರ ಆಸೆಯಂತೆ ಎಸ್.ಆರ್.ಎಸ್ ಶಿಕ್ಷಣ ಸಂಸ್ಥೆಯು ನೀಡುವ ತನ್ನ ಗುಣಾತ್ಮಕ ಶಿಕ್ಷಣದಿಂದ ಪ್ರಾರಂಭವಾದ ಮೊದಲ ೩ ವರ್ಷಗಳಲ್ಲೆ ಸಿಇಟಿ, ಜಿಇಇ, ನೀಟ್ ಪರೀಕ್ಷೆಗಳಲ್ಲಿ ೫, ೮, ೧೨ನೇ ರ್ಯಾಂಕ್ಗಳ ಮೂಲಕ ಸಂಸ್ಥೆಯ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿ, ನಂತರ ಪಿಯು ಬೋರ್ಡ್ ಪರೀಕ್ಷೆಯಲ್ಲಿ ಪ್ರತೀ ವರ್ಷ ರಾಜ್ಯಮಟ್ಟದಲ್ಲಿ ಉತ್ತಮ ರ್ಯಾಂಕ್ಗಳಿಸುವುದಲ್ಲದೇ, ಜೆಇಇ ಅರ್ಹತೆಗಾಗಿ ಎನ್ಐಟಿಯಲ್ಲಿ ವರ್ಷಂಪ್ರತಿ ಸೀಟು ಗಳಿಸುವುದಲ್ಲದೇ, ಚಿತ್ರದುರ್ಗದಿಂದ ವೈದ್ಯಕೀಯ ಕೋರ್ಸಿಗೆ ಹೋಗುವವರ ದೊಡ್ಡ ಮಟ್ಟದ ಸಂಖ್ಯೆಯ ಹಿಂದೆ ಇರುವ ತರಬೇತಿ ಸಂಸ್ಥೆ ಈ ಎಸ್.ಆರ್.ಎಸ್
ಹೆಚ್ಚು ಕಾಳಜಿಯನ್ನಿಟ್ಟುಕೊಂಡು ಉತ್ತಮ ತರಬೇತಿನ್ನು ನೀಡುತ್ತಾ ಹೋದಲ್ಲಿ ಹೀಗೆ ಪ್ರತಿವರ್ಷ ರ್ಯಾಂಕ್ಗಳನ್ನು ಪಡೆಯಬಹುದು ಎಂಬ ಅಂಶವನ್ನು ಗಮನದಲ್ಲಿಟ್ಟಕೊಂಡು, ಅನುಭವಿ ಉಪನ್ಯಾಸಕರನ್ನು ನೇಮಿಸಿ ವಿದ್ಯಾರ್ಥಿಗಳು ಪ್ರಥಮ ಪಿಯುಸಿಗೆ ಪ್ರವೇಶ ಪಡೆದು ಬಂದ ಆರಂಭದಿಂದಲೇ ಸೇತುಬಂಧ ಕಾರ್ಯ, ಸಿಇಟಿ, ಜೆಇಇ, ನೀಟ್ ಅರ್ಹತಾ ಪರೀಕ್ಷೆಗಳು ಮೌಖಿಕ ಪರೀಕ್ಷೆಗಳು ಒಟ್ಟು ಹದಿನೇಳು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಶೇಕಡ ನೂರರಷ್ಟು ಪಠ್ಯಕ್ರಮ ಹಾಗೂ ಶೇಕಡ ನೂರರಷ್ಟು ಪರೀಕ್ಷೆಗಳು ಹಾಗೂ ಭಾಷಾ ವಿಷಯಗಳಿಗೆ ಪರಿಣತಿ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಪರಿಹಾರ ಬೋಧನಾ ತರಗತಿಗಳು, ಸುಸಜ್ಜಿತ ಹಾಸ್ಟೆಲ್ ಸೌಲಭ್ಯ, ಪ್ರತಿ ತಿಂಗಳ ಮೊದಲ ವಾರದಲ್ಲಿ ಕಿರುಪರೀಕ್ಷೆಗಳು ಸಿಇಟಿ, ಜೆಇಇ, ನೀಟ್ ಕ್ಲಸ್ಟರ್ ಟೆಸ್ಟ್ಗಳ ಫಲಿತಾಂಶವನ್ನು ಸಂದೇಶದ ಮೂಲಕ ಪೋಷಕರ ಮೊಬೈಲ್ಗೆ ರವಾನೆ ಹಾಗೂ srspucollege.in ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಲಾಗುವುದು. ಮಕ್ಕಳೊಂದಿಗೆ ಆಪ್ತ ಸಮಾಲೋಚನೆ, ಮಕ್ಕಳು ವೇದಿಕೆಯಲ್ಲಿ ನಿರ್ಭಯವಾಗಿ ಮಾತನಾಡಲು ವಿಚಾರ ಸಂಕಿರಣಗಳು, ಸಾಮಾನ್ಯ ಜ್ಞಾನದ ಪರೀಕ್ಷೆಗಳು, ಇಂಗ್ಲೀಷ್ ಭಾಷಾವೃದ್ಧಿಗೆ ತಿಂಗಳಿಗೊಂದರಂತೆ ಪ್ರೊಪಿಷಿಯನ್ಸಿ ಟೆಸ್ಟ್ಗಳು, ವೃತ್ತಿ ಮಾರ್ಗದರ್ಶನ ತರಗತಿಗಳು, ಸಾಧಕ ವಿದ್ಯಾರ್ಥಿಗಳಿಗಾಗಿ ಸದಾ ಸ್ಪೂರ್ತಿಯಾಗಿರಲೆಂದು “ಸಾಧಕರೊಂದಿಗೆ ಸಂವಾದ” ಕಾರ್ಯಕ್ರಮ, ವಿದ್ಯಾರ್ಥಿ ವೇತನದ ಬಗ್ಗೆ ಮಾರ್ಗದರ್ಶನ, ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಎಸ್.ಆರ್.ಎಸ್. ಯುವತರಂಗ ಸಾಂಸ್ಕೃತಿಕ ವೇದಿಕೆ ನಿರಂತರ ಮೇಲ್ವಿಚಾರಣೆಗೆ ಇಬ್ಬರು ಉಪನ್ಯಾಸಕರು ಶೈಕ್ಷಣಿಕ ಸಲಹೆಗಾರರು, WIZWORLD ಟಿವಿ ನೇರಪ್ರಸಾರದ ಅಭಿವ್ಯಕ್ತಿ ಅಭಿನಯದ ತರಬೇತಿ (ವಾಣಿಜ್ಯ ವಿದ್ಯಾರ್ಥಿಗಳಿಗೆ) KITCHENOMIX, SHOWBIZZ ಜಾಹಿರಾತು ಲೋಕ, ಸಾಧಕರೊಂದಿಗೆ ಸಂವಾದ, ಕ್ರೀಡಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದವರಿಗೆ ಉತ್ತಮ ತರಬೇತಿಯೊಂದಿಗೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸುವಂತೆ ಉತ್ತೇಜನ. ಎನ್ ಸಿ ಆರ್ ಟಿ ಪಠ್ಯಕ್ರಮಾಧಾರಿತ ಗುಣಮಟ್ಟದ ಸ್ಟಡಿ ಮಟೀರಿಯಲ್ ಸಿದ್ದಗೊಳಿಸಿ ನೀಡುವುದು ಹೀಗೆ ವಿವಿಧ ಕಾಳಜಿಯ ಅಂಕಗಳೊಂದಿಗೆ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಎಸ್. ಆರ್. ಎಸ್. ಸಂಸ್ಥೆ ಹಗಲಿರುಳು ಶ್ರಮಿಸುತ್ತಿದೆ.
ಎಸ್ ಆರ್ ಎಸ್ ನಂದನ ಮತ್ತು ಎಸ್ ಆರ್ ಎಸ್ ಚಂದನ ಬಾಲಕರು ಮತ್ತು ಬಾಲಕಿಯರಿಗಾಗಿ ಪ್ರತ್ಯೇಕ ಹಾಸ್ಟೆಲ್ ಗಳಾಗಿದ್ದು ವಿದ್ಯಾರ್ಥಿಗಳಿಗೆ ಇಲ್ಲಿ ಮನೆಯ ವಾತಾವರಣಕ್ಕಿಂತ ಹೆಚ್ಚಾಗಿಯೇ ಅಧ್ಯಯನ ಮತ್ತು ಅಭ್ಯಾಸಕ್ಕೆ ಯೋಗ್ಯವಾಗಿವೆ. ಪ್ರತಿದಿನ ಒಂದೊಂದು ವಿಷಯದ ಉಪನ್ಯಾಸಕರು Study Hours ಮೇಲ್ವಿಚಾರಣೆ ಮಾಡುವುದರಿಂದ ಯಾವುದೇ ವಿಷಯದ ಕುರಿತಾದ ಸಮಸ್ಯಗಳನ್ನೂ ಪರಿಹರಿಸಿಕೊಳ್ಳಲು ಸಾಧ್ಯವಾಗುತ್ತದೆ. ಓದಿನ ಕಡೆ ಹೆಚ್ಚು ಗಮನ ಹರಿಸಿ ಉತ್ತಮ ಅಂಕ ಗಳಿಸಲು ಸಹಕಾರಿ ಆಗಿದೆ.
ಶುಚಿ ರುಚಿಗೆ ಹೆಚ್ಚಿನ ಆದ್ಯತೆಯ ಜೊತೆಗೆ ಆರೋಗ್ಯಕರ ಊಟದ ವ್ಯವಸ್ಥೆ ನಮ್ಮ ಧ್ಯೇಯ. ವಿದ್ಯಾರ್ಥಿಗಳನ್ನ ಬೆಳಗ್ಗೆ ೫ ಗಂಟೆಗೆ ಎಚ್ಚರಿಸಿ ಅಭ್ಯಾಸಕ್ಕೆ ಅಣಿಮಾಡುವ ಪರಿಪಾಠ ನಮ್ಮ ಹಾಸ್ಟೆಲ್ ಗಳಲ್ಲಿ ಇರುವುದರಿಂದ ವಿದ್ಯಾರ್ಥಿಗಳಲ್ಲಿ ಶಿಸ್ತನ್ನ ಮೈಗೂಡಿಸಲು ಸಹಾಯವಾಗುತ್ತದೆ.